Thursday 8 March 2012

ಇಂದು ಅಂತರರಾಷ್ಟ್ರೀಯ ದುಡಿಯುವ ಮಹಿಳಾ ದಿನಾಚರಣೆ

ಇಂದು ಅಂತರರಾಷ್ಟ್ರೀಯ ದುಡಿಯುವ ಮಹಿಳಾ ದಿನಾಚರಣೆ,  1908ರಲ್ಲಿ ನ್ಯೂಯಾರ್ಕ್ ನಗರದಲ್ಲಿ ತಮ್ಮ ಹಕ್ಕುಗಳು ಹಾಗೂ
ಸಮಾನತೆಗಾಗಿ ಗಾರ್ಮೆಂಟ್ಸ್ ಮಹಿಳಾ ಕಾರ್ಮಿಕರು ಬೀದಿಗೆ ಇಳಿದು ಹೋರಾಟ ಮಾಡಿದ ಅವಿಸ್ಮರಣೀಯ ದಿನ. ತಮ್ಮ ಮೇಲಿನ ಶೋಷಣೆಯನ್ನು ಖಂಡಿಸಿ ಹೋರಾಟ ಮಾಡುವಾಗ ಹಲವಾರು ಮಹಿಳೆಯರು ಪೋಲೀಸರ ದೌರ್ಜನ್ಯಕ್ಕೆ ತಮ್ಮ ಜೀವಗಳನ್ನು ಕಳೆದುಕೊಂಡರು. ಆದರೂ ಎದೆಗುಂದದೆ ನಿರಂತರ ಹೋರಾಟವನ್ನು ಮಾಡಿ ತಮ್ಮ ಹಕ್ಕುಗಳನ್ನು ಪಡೆಯಲು ಯಶಸ್ವಿಯಾದರು. ಆ ನಂತರದಲ್ಲಿ ಆ ಹೋರಾಟದ ಸ್ಪೂರ್ತಿಯಿಂದ ವಿಶ್ವದಾದ್ಯಂತ ಮಹಿಳ ಚಳುವಳಿ ಆರಂಭವಾಯಿತು. 


ವಿಶ್ವ ದುಡಿಯುವ ಮಹಿಳಾ ದಿನಾಚರಣೆಯನ್ನು ಜೆರ್ಮನಿಯ ಕಮ್ಯುನಿಸ್ಟ್ ನಾಯಕಿ ಕ್ಲಾರ ಜೆಟ್ಕಿನ್ರ ನೇತೃತ್ವದಲ್ಲಿ ಕಾರ್ಮಿಕ ವರ್ಗ ಈ ದಿನವನ್ನು ಅಂತರರಾಷ್ಟ್ರೀಯ ದುಡಿಯುವ ಮಹಿಳಾ ದಿನಾಚರಣೆಯಾಗಿ ಆಚರಣೆಯನ್ನು ಜಾರಿಗೆ ತಂದಿತು. ಇಂದು ಈ ವಿಶೇಷ ದಿನದ ಶತಮಾನೋತ್ಸವವನ್ನು ಎಲ್ಲೆಡೆ ಆಚರಿಸಲಾಗುತ್ತಿದೆ. ಹೆಣ್ಣನ್ನು ಗುಲಾಮಳಾಗಿ ಶೋಷಣೆ ಮಾಡುತ್ತಿರುವ ಪುರುಷಪ್ರಧಾನ ಸಮಾಜದಲ್ಲಿ ಮಹಿಳೆ ಎಚ್ಚೆತ್ತು ಐಕ್ಯತೆಯಿಂದ ಹೋರಾಟ ಮಾಡಬೇಕಿದೆ.

ಮಹಿಳೆಯ ಹೋರಾಟ ಯಶಸ್ವಿಯಾಗಲಿ.. 

ತಮ್ಮ ಮೇಲಿನ ಶೋಷಣೆಯಿಂದ ಮಹಿಳೆ ಮುಕ್ತಳಾಗಲಿ ಎಂದು ಆಶಿಸೋಣ



: ಸ್ವಾಭಿಮಾನಿ ಮಹಿಳಾ ಹೋರಾಟ  


Wednesday 9 March 2011

ಸ್ವಾಭಿಮಾನಿ ಮಹಿಳಾ ಹೋರಾಟ



ನಿತ್ಯ ನಿರಂತರ ಮಹಿಳೆಯ ಮೇಲೆ ಜಗತಿನಾದ್ಯಂತ ಅತ್ಯಾಚಾರ, ದಬ್ಬಾಳಿಕೆ, ಲೈಂಗಿಕ ಶೋಷಣೆ, ದೈಹಿಕ ಹಿಂಸೆ, ಸಾಂಸಾರಿಕ ವಂಚನೆಗಳು ನಡೆಯುತ್ತಿವೆ. ೫೦%ರಷ್ಟು ಇರುವ ಮಹಿಳೆಗೆ ಸಿಕ್ಕಿರುವ ಸಮಾನತೆಯ ಪಾಲೆಷ್ಟು?. ಪುರುಷನಿಗಿಲ್ಲದ ಧಾರ್ಮಿಕ ಸಾಮಾಜಿಕ ಕಟ್ಟುಪಾಡುಗಳು ಮಹಿಳೆಗೇಕೆ? ಉತ್ತರಿಸಲು ಯಾರಿಲ್ಲ. ಪ್ರಶ್ನೆಗಳು ನಮ್ಮಲ್ಲೇ ಇವೆ ಉತ್ತರಗಳು ನಮ್ಮ ಹೋರಾಟದಲ್ಲಿ ಇವೆ. ಬನ್ನಿ ಜೊತೆಯಾಗಿ. ಮಹಿಳೆಯ ಮೇಲಿನ ಶೋಷಣೆಯನ್ನು ಬುಡ ಸಮೇತ ಕಿತ್ತೊಗೆಯೋಣ! ಅಡಗಿರುವ ನೋವಿನ ಧ್ವನಿಗೆ ವಿಮುಕ್ತಿಯ ದಾರಿ ತೋರೋಣ! ಪ್ರಜ್ಞಾವಂತ ಸಮಾಜಕ್ಕೆ ಅಡಿಪಾಯ ಹಾಕೋಣ..
 'ಸ್ವಾಭಿಮಾನಿ ಮಹಿಳಾ ಹೋರಾಟ'
 ರಾಜ್ಯ ಸಮಿತಿ

ಹೆಚ್ಚಿನ ಮಾಹಿತಿಗೆ:
ಚೇತನಧಾರೆ ಟ್ರಸ್ಟ್ ಮತ್ತು ಜನಾಸ್ತ್ರ ಸಂಘಟನೆ.ನಂ.10, 2ನೇ ಅಡ್ಡರಸ್ತೆ, ಇಸ್ಕಾನ್ ದೇವಾಲಯದ ಮುಂಭಾಗ
ಯಶವಂತಪುರ, ಬೆಂಗಳೂರು- 560022.
ಫೋ:
9448702368http://bangaloreslumyouth.blogspot.in/http://www.swabhimanimahilahorata.blogspot.in/